¡Sorpréndeme!

News Cafe | ಬೆಂಗಳೂರು ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು | HR Ranganath | Aug 8, 2022

2022-08-08 0 Dailymotion

ಬೆಂಗಳೂರು ನಗರದಲ್ಲಿ ರಸ್ತೆಗುಂಡಿಗಳನ್ನ ಮುಚ್ಚಲು ಕಳೆದ ಮೂರು ತಿಂಗಳಿಂದ ಸರಿಸುಮಾರು 2 ಕೋಟಿಗೂ ಅಧಿಕ ಹಣ ಸುರಿಯಲಾಗಿದೆ. ಆದ್ರೆ ಏನು ಪ್ರಯೋಜನವಾಗಿಲ್ಲ.. ಸತತ ಮಳೆಯಿಂದಾಗಿ ನಗರದ ಹಲವೆಡೆ ಗುಂಡಿಗಳು ಬಾಯಿ ತೆರೆದಿದೆ. ಮೇ ಅಂತ್ಯದಲ್ಲಿ ಗುಂಡಿಗಳನ್ನ ಮುಚ್ಚಲು `ಫಿಕ್ಸ್ ಮೈ ಸ್ಟ್ರೀಟ್ ಆಪ್' ಅಡಿಯಲ್ಲಿ ಸರ್ವೆ ಕೈಗೊಳ್ಳಲಾಗಿತ್ತು. ಈ ಸರ್ವೇ ಪ್ರಕಾರ ಬೆಂಗಳೂರಲ್ಲಿ 9,207 ರಸ್ತೆಗುಂಡಿಗಳು ಸಿಕ್ಕಿವೆ. ಪಾಲಿಕೆ ಅಧಿಕಾರಿಗಳ ಲೆಕ್ಕಚಾರದ ಪ್ರಕಾರ ಎರಡೂವರೆ ಅಡಿ ಅಗಲದ ಗುಂಡಿ ಮುಚ್ಚಲು ಸರಿಸುಮಾರು 1,200 ರೂಪಾಯಿ ಖರ್ಚು ಮಾಡಲಾಗಿದೆ. ಈ ಪ್ರಕಾರ ಸುಮಾರು 13 ಸಾವಿರ ಗುಂಡಿಗಳನ್ನು ಮುಚ್ಚಲು ಕನಿಷ್ಠ 2 ಕೋಟಿ ಖರ್ಚು ಮಾಡಲಾಗಿದೆ. ಇದನ್ನ ರಸ್ತೆ ಗುಂಡಿ ಮುಚ್ಚಿದ ಗುತ್ತಿಗೆದಾರರ ತಲೆ ಮೇಲೆ ಹಾಕಿಲ್ಲ.. ಡಿಎಲ್‍ಪಿ ರಸ್ತೆ ನಿರ್ವಹಣಾ ಅವಧಿ ಇದ್ದಾಗ ಗುತ್ತಿಗೆದಾರನೇ ಮುಚ್ಚಬೇಕು. ಗುತ್ತಿಗೆದಾರನಿಂದ ಹಣ ವಸೂಲಿ ಮಾಡದೇ ಪಾಲಿಕೆ ಆರ್ಥಿಕ ವಿಭಾಗದಿಂದ ಹಣ ವಸೂಲಿ ಮಾಡಲು ಪ್ರಸ್ತಾವನೆ ನೀಡಿದೆ.

#publictv #newscafe #hrranganath